ನಮ್ಮ ಹೆಮ್ಮೆ. ಇದು ನಮ್ಮ ಹಬ್ಬ. ಇದು ಕನ್ನಡಿಗರ ಹೆಮ್ಮೆಯ ಹಬ್ಬ. ಜೈ ಭುವನೇಶ್ವರಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.
ನಾಡದೇವತೆ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹಾಗೂ ನಾಡಗೀತೆಯನ್ನು ಹಾಡುವ ಮೂಲಕ 68 ನೇ ಕನ್ನಡ ರಾಜ್ಯೋತ್ಸವವನ್ನು ರೂರಲ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಚರಿಸಲಾಯಿತು. ಅಧ್ಯಕ್ಷತೆಯನ್ನು ಡಾ ವಿ ಎಂ ಪಾಟೀಲ್ ವಹಿಸಿದ್ದರು.ಈ ಕಾರ್ಯಕ್ರಮವನ್ನು ಕಾಲೇಜಿನ ಮ್ಯಾಕನಿಕಲ್ ವಿಭಾಗದ ಪ್ರಾಧ್ಯಾಪಕರಾದ ಪುನೀತಗೌಡ ಪಾಟೀಲ್ ಅವರು ನೇರವೆರಿಸಿದರು.ನಮ್ಮ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಅ೦ಕಿತಾ ಇವರು “ಶಿಲೆಗಳು ಸ೦ಗೀತಾವ ಹಾಡಿದೆ” ಎ೦ಬ ಹಾಡಿಗೆ ನ್ರತ್ಯ ಮಾಡಿದರು ಅಲ್ಲದೆ ಕುಮಾರ ಶಶಾ೦ಕ ಮತ್ತು ಕುಮಾರಿ ತನ್ವಿ ಇವರು ಕೂಡ ಹಾಡುಗಳನ್ನ ಹಾಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕ ,ಶಿಕ್ಷಕೇತರ ವೃಂದದವರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರವೆರಿಸಿದರು.
Opmerkingen